Welcome to Bharathi college.   PG Admission Open.     Applications available in College Office.
About bharathi credit co-operative society
ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂದು, ನಂಬಿಕೆ, ವಿಶ್ವಾಸಾರ್ಹತೆ ಪಾರದರ್ಶಕ ಆಡಳಿತಕ್ಕೆ ಮನ್ನಣೆ, ಪ್ರಗತಿ ಪಥದತ್ತ ಭಾರತೀ ಸೊಸೈಟಿ.,

ಒಂದು ಶತಮಾನಕ್ಕೂ ಹೆಚ್ಚಿನ ಅವಧಿಯ ಸಹಕಾರ ಪರಂಪರೆಯನ್ನು ಹೊಂದಿರುವ ನಮ್ಮ ರಾಜ್ಯ ಸಹಕಾರ ಕ್ಷೇತ್ರದ ಮೂಲಕ ಗಣನೀಯ ಸೇವೆ ಮಾಡಿದೆ. ಸಹಕಾರಿ ಕ್ಷೇತ್ರದ ಮೂಲಕ ದೇಶದ ಸರ್ವಾಂಗೀಣ ಆರ್ಥಿಕ, ಸಾಮಾಜಿಕ & ಶೈಕ್ಷಣಿಕ ಅಭಿವೃದ್ಧಿ ಸಾಧ್ಯವೆಂದು ತಿಳಿದು ಈ ಕ್ಷೇತ್ರದ ಮೂಲಕ ಹಲವಾರು ಸಂಘ ಸಂಸ್ಥೆಗಳನ್ನು ಪ್ರಾರಂಭಿಸಿ ಬಹಳ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿವೆ. ಇಂತಹ ಸಂಘ ಸಂಸ್ಥೆಗಳಲ್ಲಿ ಪತ್ತಿನ(ಕ್ರೆಡಿಟ್) ಸಹಕಾರ ಸಂಘವು ಒಂದಾಗಿದ್ದು, ಇಂದು ನಮ್ಮ ರಾಜ್ಯದಲ್ಲಿ ಹಲವಾರು ಪತ್ತಿನ ಸಹಕಾರ ಸಂಘಗಳು ಪ್ರಾರಂಭವಾಗಿದ್ದು ಆಧುನಿಕ ಪರಿಕರಗಳ ಮೂಲಕ ಸಹಕಾರಿಗಳಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ.

“ಸಹಕಾರ” ಎಂಬ ಪದವೇ ಒಟ್ಟಿಗೆ ಕೆಲಸ ಮಾಡು ಎಂಬುದಾಗಿದೆ. ಸಹಕಾರ ತತ್ವದಲ್ಲಿ ನಂಬಿಕೆ ಮತ್ತು ಆಚರಣೆಯಲ್ಲಿ ಬದ್ಧತೆ ಇರಿಸಿಕೊಂಡು ಕಾವೇರಿ ಹೋರಾಟಗಾರರಾದ ಡಾ|| ಜಿ ಮಾದೇಗೌಡರವರ ಆಶಯದಂತೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಸಿ ಎ ಕೆರೆ ಹೋಬಳಿಯ ಭಾರತೀನಗರ(ಕೆ ಎಂ ದೊಡ್ಡಿ)ದಲ್ಲಿ ಭಾರತೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ.,ವು ದಿನಾಂಕ: 02.06.20210ರಲ್ಲಿ 537 ಸದಸ್ಯರನ್ನು ನೋಂದಾಯಿಸಿಕೊಂಡು ರೂ.11,70,000 ಲಕ್ಷ ಷೇರು ಸಂಗ್ರಹಣೆ ಮಾಡಿ ಮದ್ದೂರು ಮತ್ತು ಮಳವಳ್ಳಿ ತಾಲ್ಲೂಕಿಗೆ ತನ್ನ ಕಾರ್ಯವ್ಯಾಪ್ತಿಗೆ ನೋಂದಾವಣಿಯಾಗಿ ದಿನಾಂಕ; 16.10.2010ರಂದು ಡಾ|| ಜಿ ಮಾದೇಗೌಡರವರ ಸಾನಿಧ್ಯದಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ಪ್ರಾರಂಭಿಸಿದ್ದು. ಆಡಳಿತ ಮಂಡಳಿಗೆ 13 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿ ದಕ್ಷ, ಪ್ರಾಮಾಣಿಕ, ಸಮಯ ಪಾಲನೆ ಜೊತೆಗೆ ಸಹಕಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಫಾರ ಜ್ಞಾನ ಹೊಂದಿರುವ ಪ್ರಸ್ತುತ ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾದ ಮಧು ಜಿ ಮಾದೇಗೌಡರವರನ್ನು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು.

ಈ ಸಹಕಾರ ಸಂಘವು 10 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿ ದಿ:16.10.2020ರಂದು ದಶಮಾನೋತ್ಸವನ್ನು ಆಚರಿಸಿಕೊಂಡಿದೆ. ತಾನೊಬ್ಬನೇ ಬಾಳಿದರೆ ಸಾಲದು, ತನ್ನೊಂದಿಗೆ ಸಮಾಜವೂ ಬೆಳೆಯಬೇಕೆಂಬ ಸಹಕಾರ ರಂಗದ ಮೂಲ ತತ್ವವನ್ನು ಅಳವಡಿಸಿಕೊಂಡು ನಡೆಯುವುದರ ಜೊತೆಗೆ ನಿಸ್ವಾರ್ಥ ಪ್ರಾಮಾಣಿಕ ಸೇವೆಯಿಂದ ಕೂಡಿದಾಗ ಸಂಘ ಸಂಸ್ಥೆಗಳು ಪ್ರಬಲವಾಗಿ ಬೆಳೆಯಲು ಸಾಧ್ಯ ಎಂಬುದು ಈ ಸಹಕಾರಿ ಸಂಘದ ಆಡಳಿತ ಮಂಡಳಿಯ ತತ್ವ, ಇದರಂತೆ ನಮ್ಮ ಸಹಕಾರಿ ಸಂಘಕ್ಕೆ ಸಂಸ್ಥಾಪಕ ಅಧ್ಯಕ್ಷರಾಗಿ 2010 ರಿಂದ ಇಲ್ಲಿವರೆಗೂ 12 ವರ್ಷಗಳು ಯಶಸ್ವಿಯಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಮಧು ಜಿ ಮಾದೇಗೌಡರವರ ಸಂಪೂರ್ಣ ಬೆಂಬಲದಿಂದ ನಮ್ಮ ಸಹಕಾರ ಸಂಘದಲ್ಲಿ ಬ್ಯಾಂಕಿಂಗ್ ಚಟುವಟಿಕೆಗಳು, ಸಂಘದ ವ್ಯವಹಾರವನ್ನು ಪಿಯೊಸೆಟ್ ಸಾಪ್ಟ್‍ವೇರ್ ಪೂನಾ ಇವರ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಐಸಿಐಸಿಐ ಬ್ಯಾಂಕ್‍ನ ಸಹಯೋಗದೊಂದಿಗೆ ಗಣಕೀಕೃತ ಬ್ಯಾಂಕಿಂಗ್ ವ್ಯವಸ್ಥೆ ಮಾಡಿಕೊಂಡು ಸದಸ್ಯರಿಗೆ ಮತ್ತು ಗ್ರಾಹಕರಿಗೆ ಅತೀ ಶೀಘ್ರವಾಗಿ ಸೇವೆ ನೀಡುವುದು, ಆರ್‍ಟಿಜಿಎಸ್, ಎನ್‍ಇಎಫ್‍ಟಿ, ಡಿಮ್ಯಾಂಡ್ ಡ್ರಾಪ್ಟ್(ಡಿಡಿ) ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ, ಯುಪಿಐ ಆಧಾರಿತ ಕ್ಯೂ ಆರ್ ಕೋಡ್ ಹಣ ಸಂಗ್ರಹಣೆ ವ್ಯವಸ್ಥೆ, ಫೇ ಡೈರಕ್ಟ್ ಕಾರ್ಡ್(ಎಟಿಎಂ) ವ್ಯವಸ್ಥೆ, ಇತರ ಜೊತೆಗೆ ಇ-ಸ್ಟಾಂಪ್ ಸೇವೆಯನ್ನು ಒದಗಿಸಲಾಗುತ್ತಿದೆ.

ಸಹಕಾರಿ ಸಂಘವು ಉಳಿತಾಯ ಖಾತೆ, ಚಾಲ್ತಿ ಖಾತೆ, ಪಿಗ್ಮಿ ಠೇವಣಿ ಸಂಗ್ರಹಣೆ, ಆವರ್ತಕ ಠೇವಣಿ ಖಾತೆ, ಎಫ್‍ಡಿ ಠೇವಣಿ ಖಾತೆ, ಸಂಬಳಾಧಾರಿತ ಸಾಲ, ವ್ಯಾಪಾರ ಆಧಾರಿತ ಸಾಲ, ವಾಹನ ಸಾಲ ಸೌಲಭ್ಯಗಳನ್ನು ಹೊಂದಿದೆ. ಇತರ ಜೊತೆಗೆ ಮುಂದಿನ ದಿನಗಳಲ್ಲಿ ವಿಮೆ ಸೌಲಭ್ಯ, ಆರೋಗ್ಯ ಕಾರ್ಡ್ ಇನ್ನೂ ಇತರ ಸೇವೆಗಳನ್ನು ಪ್ರಾರಂಭಿಸಲಾಗಿತ್ತದೆ. ಸಂಘವು 2016-2017ರಿಂದ ಆಡಿಟ್‍ನಲ್ಲಿ ‘ಎ’ ವರ್ಗೀಕರಣ ಪಡೆಯುತ್ತಾ ಬಂದಿದೆ. ಇದುವರೆವಿಗೂ ನಮ್ಮ ಸಂಘವು ಉತ್ತಮ ಲಾಭವನ್ನ ಗಳಿಸುತ್ತಿದ್ದು ಷೇರುದಾರರಿಗೆ ಸರಾಸರಿ 25%ರಷ್ಟು ಲಾಭಾಂಶ ನೀಡುತ್ತಾ ಸಾಗಿದೆ. ಇದರ ಜೊತೆಗೆ ಸದಸ್ಯರು ಮರಣ ಹೊಂದಿದಾಗ ಅವರ ವಾರಸುದಾರರಿಗೆ ಈಗ 20,000ರೂಗಳನ್ನು ಮರಣ ನಿಧಿ ಪರಿಹಾರವಾಗಿ ನೀಡುತ್ತಿದ್ದೇವೆ. ನಮ್ಮ ಸಹಕಾರಿ ಸಂಘವು ಆರಂಭವಾಗುವುದಕ್ಕಿಂತ ಮುಂಚೆ ಭಾರತೀ ಎಜುಕೇಷನ್ ಟ್ರಸ್ಟ್ ರಾಷ್ಡ್ರೀಕೃತ ಬ್ಯಾಂಕ್‍ಗಳಲ್ಲಿ ತನ್ನ ವ್ಯವಹಕಾರ ನಡೆಸುತ್ತಿತ್ತು, ಕ್ರಮೇಣ ಸೊಸೈಟಿಯಲ್ಲಿ ವ್ಯವಹಾರ ಆರಂಭಿಸ ನೌಕರರಿಗೆ ವೇತನ ವಿತರಿಸಿ, ಸಾಲ ಸೇರಿದಂತೆ ನಾನಾ ಸೌಲಭ್ಯ ನೀಡುತ್ತಿದೆ. ಇದಲ್ಲದೆ ಭಾರತೀ ಎಜುಕೇಷನ್ ಟ್ರಸ್ಟ್‍ನ ಎಲ್ಲಾ ಅಂಗ ಸಂಸ್ಥೆಗಳ ಆರ್ಥಿಕ ವ್ಯವಹಾರ ಈ ಸಂಸ್ಥೆಯಲ್ಲಿಯೇ ನಡೆಯುತ್ತಿದ್ದು, ವಿದ್ಯಾರ್ಥಿಗಳ ಶುಲ್ಕ ಸಹ ಸಂಗ್ರಹಿಸಿತ್ತದೆ

ಸದಸ್ಯರ ಸಹಕಾರ, ಗ್ರಾಹಕರ ವ್ಯವಹಾರ, ಆಡಳಿತ ಮಂಡಳಿಯವರ ನಿಸ್ವಾರ್ಥ ಸೇವೆ ಹಾಗೂ ಸಿಬ್ಬಂದಿ ವರ್ಗದ ಕಾರ್ಯ ನಿಷ್ಠೆಯಿಂದಾಗಿ ಸಂಘ ಹನ್ನೆರಡು ವರ್ಷದಲ್ಲಿ ಹೆಮ್ಮರವಾಗಿ ಬೆಳೆದು ಸಮಾಜದ ಎಲ್ಲಾ ವರ್ಗದ ಜನರಿಗೆ ಆರ್ಥಿಕ ಬೆನ್ನೆಲುಬಾಗಿದೆ.

2021-2022ರ ಸಾಲಿನ ಪ್ರಗತಿಯ ವಿವರ.(ಲಕ್ಷ ರೂ.ಗಳಲ್ಲಿ)
ಸದಸ್ಯರು 1127
ಷೇರು ಬಂಡವಾಳ 43.80
ಇತರೆ ನಿಧಿಗಳು 97.37
ಒಟ್ಟು ಠೇವಣಿಗಳು 2464.50
ಒಟ್ಟು ಸಾಲಗಳು 2433.96.
ನಿವ್ವಳ ಲಾಭ 39.24
ಆಡಿಟ್ ವರ್ಗೀಕರಣ 3‘ಎ’
bank Photos