Welcome to Bharathi college.   PG Admission Open.     Applications available in College Office.
Hostel Facility

ಭಾರತಿ ಎಜುಕೇಷನ್ ಟ್ರಸ್ಟ್ ಸ್ಥಾಪನೆಯಾಗಿ 60 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಭಾರತಿ ಎಜುಕೇಶನ್ ಟ್ರಸ್ಟ್ ಅಂಗಸಂಸ್ಥೆಯ ಒಂದು ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಭಾರತಿ ವಸತಿನಿಲಯಗಳ ಬಗ್ಗೆ ತಿಳಿಸುವುದುಸಮಂಜಸವಾಗಿದೆ.

ಭಾರತಿ ಎಜುಕೇಷನ್ ಟ್ರಸ್ಟ್‍ನ ವಿದ್ಯಾಸಂಸ್ಥೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿದಂತೆ ಉಳಿದ ವಿಭಾಗಗಳಲ್ಲಿ ವ್ಯಾಸಂಗ ಮಾಡಲು ಭಾರತೀನಗgದÀಸುತ್ತಮುತ್ತಲಿನಹಳ್ಳಿಗಾಡಿನ ಪ್ರದೇಶಗಳಿಂದ ಆಗಮಿಸುತ್ತಿದ್ದ ವಿದ್ಯಾರ್ಥಿಗಳು ಪ್ರಯಾಣಿಸಲು ಬಸ್ ಸೌಕರ್ಯ ಉತ್ತಮವಾಗಿಲ್ಲದ ಹಾಗೂ ದೂರದ ಪ್ರದೇಶಗಳಿಗೆ ಮಕ್ಕಳು ಹೋಗಿಬರಲು ಸಾದ್ಯಾವಾಗದ್ದಿದ ಪರಿಸ್ಥಿತಿಯನ್ನು ಮನಗಂಡ ಭಾರತಿ ಎಜುಕೇಷನ್ ಟ್ರಸ್ಟ್‍ನಸಂಸ್ಥಾಪಕ ಅಧ್ಯಕ್ಷರು1972 ರಲ್ಲಿ ಬಾಲಕ ಬಾಲಕರ ವಸತಿ ನಿಲಯ ವನ್ನು ಸ್ಥಾಪಿಸಿದರು.

ಮೊದಲು ಮರಗಳ ಹಂಚಿನ 30 ಕೊಠಡಿಗಳಿಂದ ಪ್ರಾರಂಭವಾದ ಬಾಲಕರ ವಸತಿ ನಿಲಯ 2001 ರಲ್ಲಿ 50 ಕೊಠಡಿಗಳನ್ನು ಒಳಗೊಂಡ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು ವರ್ಷದಿಂದ ವರ್ಷಕ್ಕೆ ವಸತಿ ನಿಲಯಕ್ಕೆಪ್ರವೇಶಾತಿ ಹೆಚ್ಚಳವಾದ ಹಿನ್ನಲೆಯಲ್ಲಿಅತ್ಯಾಧುನಿಕವಾದ ವ್ಯವಸ್ಥೆಗಳಾದ ಪ್ರತ್ಯೇಕವಾದ ಕಾಟ್, ಅಲಮಾರ ವ್ಯವಸ್ಥೆ ಹಾಗೂ ಉತ್ತಮ ರೀತಿಯ ಅಡಿಗೆಮನೆ ಮತ್ತು ಡೈನಿಂಗ್ ಹಾಲ್ ಅತ್ಯಾಧುನಿಕ ಒಳಗೊಂಡಂತೆ 122 ಕೊಠಡಿಗಳನ್ನು ಒಳಗೊಂಡ ಕಟ್ಟಡವನ್ನು 2014 ರಲ್ಲಿನಿರ್ಮಿಸಲಾಗಿದೆಬಾಲಕರ ವಸತಿ ನಿಲಯದಲ್ಲಿ ಪ್ರಾರಂಭದಲ್ಲಿ 30 ವಿದ್ಯಾರ್ಥಿಗಳಿದ್ದು ಇಂದು 230 ವಿದ್ಯಾರ್ಥಿಗಳಿದ್ದು ಅಭ್ಯಾಸ ಮಾಡುತ್ತಿದ್ದಾರೆ.ಅಲ್ಲದೆ ಪ್ರಾರ್ಥಮಿಕ ಹಂತದಿಂದ ಉನ್ನತ ಶಿಕ್ಷಣದ ವಿಭಾಗದ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಒಟ್ಟು 1000 ವಿದ್ಯಾರ್ಥಿಗಳಿಗೆ ಪ್ರತಿ ದಿನ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಬಾಲಕರ ವಸತಿ ನಿಲಯದಲ್ಲಿ ಕಲ್ಪಿಸಲಾಗಿದೆ.

ಮುಂದುವರೆದು ಭಾರತಿ ಎಜುಕೇಷನ್ ಟ್ರಸ್ಟ್‍ನ ವಿದ್ಯಾಸಂಸ್ಥೆಗಳಲ್ಲಿ ಬಾಲಕಿಯರು ವಿದ್ಯಾಭ್ಯಾಸವನ್ನು ಹೆಚ್ಚು ಹೆಚ್ಚುಆರಂಭಿಸಿದ ದಿನಗಳಲ್ಲಿ ಇವರಿಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಭಾರತೀನಗರದ ಸುತ್ತಮುತ್ತ ಸರ್ಕಾರಿ ಹಾಗೂ ಇನ್ನಿತರೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಉತ್ತಮ ವ್ಯವಸ್ಥೆ ಹಾಗೂ ರಕ್ಷಣೆಯನ್ನು ಒಳಗೊಂಡಭಾರತಿ ಉದ್ಯೋಗಸ್ಥ ಮಹಿಳಾ ವಸತಿ ನಿಲಯವನ್ನು ದಿನಾಂಕ 23-02-1997ರಂದು ನಿರ್ಮಾಣ ಮಾಡಿ ಪ್ರಾರಂಭಿಸಲಾಯಿತು ಉದ್ಯೋಗಸ್ಥ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಗಳಿದ್ದು ಒಟ್ಟು 40 ಕೊಠಡಿ ಹಾಗೂ ಅಡಿಗೆಮನೆ ಮತ್ತು ವ್ಯವಸ್ಥೆ ಇದೆ.

ಭಾರತಿ ಎಜುಕೇಶನ್ ಟ್ರಸ್ಟ್ ನಲ್ಲಿ ಔಷಧ ವಿಜ್ಞಾನ ಕಾಲೇಜು ಪ್ರಾರಂಭವಾದ ನಂತರದಲ್ಲಿ ಕೇರಳ ಮತ್ತಿತರ ಹೊರರಾಜ್ಯದವಿದ್ಯಾರ್ಥಿಗಳು ಕಾಲೇಜಿನಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದ ನಂತರ ಸದರಿ ವಿದ್ಯಾರ್ಥಿನಿಯರಿಗೆ ವಸತಿ ವ್ಯವಸ್ಥೆ ಕಲ್ಪಿಸಲು 2010ರಲ್ಲಿಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ಉತ್ತಮ ಅಡುಗೆಮನೆ ಹಾಗೂ ಡೈನಿಂಗ್ ಹಾಲ್ ಹಾಗೂ 35 ಕೊಠಡಿಗಳನ್ನು ಒಳಗೊಂಡ ಮತ್ತೊಂದು ಕಟ್ಟಡವನ್ನು ನಿರ್ಮಾಣ ಮಾಡಲಾಯಿತು ಇಂದು ಭಾರತಿ ಮಹಿಳಾ ವಸತಿ ನಿಲಯದಲ್ಲಿ ಒಟ್ಟು 290 ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದುಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಇವರೆಲ್ಲರಿಗೂ ಭಾರತಿ ಮಹಿಳಾ ಹಾಸ್ಟೆಲ್ನಲ್ಲಿ ಕರ್ನಾಟಕ-ಕೇರಳ ಮೆಸ್ ಗಳ ಮೂಲಕ ಆ ಪ್ರದೇಶಗಳ ಊಟೋಪಚಾರವನ್ನು ಕಲ್ಪಿಸಲಾಗುತ್ತಿದೆ.

ಭಾರತಿ ಬಾಲಕರ ಮತ್ತು ಉದ್ಯೋಗಸ್ಥ ಬಾಲಕಿಯರ ಮಹಿಳಾ ವಸತಿ ನಿಲಯದಲ್ಲಿ ಈ ಕೆಳಕಂಡ ಅಧಿಕಾರಿಗಳು ಅಧ್ಯಾಪಕರು ನಿಲಯಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
1. ಶ್ರೀ. ಬಸಪ್ಪಎಚ್
2. ಶ್ರೀ. ರೇವಣ್ಣ
3. ಶ್ರೀ. ಎಚ್ ಲಿಂಗಯ್ಯ
4. ಶ್ರೀ. ಎಮ್ ಶಿವಣ್ಣ
5. ಶ್ರೀ. ರಾಜೇಗೌಡ
6. ಶ್ರೀ. ಜವರೇಗೌಡ
7. ಶ್ರೀ. ಕೆ ಸಿ ಚಲುವರಾಜು
8. ಶ್ರೀ. ಜಗದೀಶ ಜಿ ಎನ್
9 ಶ್ರೀ. ಸ್ವಾಮಿ ಸಿ
10 ಶ್ರೀ. ಸುಬ್ಬೇಗೌಡ
11 ಶ್ರೀ. ದೇವರಾಜು

ಪ್ರಸ್ತುತದಲ್ಲಿ ಶ್ರೀ.ಜಗದೀಶ ಜಿ ಎನ್, ಶ್ರೀ. ದೇವರಾಜುರವರು ಭಾರತಿ ಬಾಲಕರ ನಿಲಯದಲ್ಲಿ ಶ್ರೀಮತಿ ಪ್ರಮೀಳ ಟಿ, ಶ್ರೀಮತಿ ಶಶಿರೇಖಾ ರವರು ನಿಲಯ ಪಾಲಕರಾಗಿ ಮತ್ತುಶ್ರೀಮತಿ ಮಾನಸರವರು ಲೆಕ್ಕಿಕರಾಗಿಕಾರ್ಯರ್ನಿವಹಿಸುತ್ತಿದ್ದಾರೆ

Warden Details

Jagadish

Designation
  Boys Hostel Warden

Pramila

Designation
  Girls Hostel Warden
Hostel Photo